#ModernFarmingRevolution: Paving the way for Better yields, Better soil

Rain and #IndianFarmers :Monsoon Mystery

Since the ancestor’s time, so has the east monsoon
Or even when the monsoon fell … or did not fall.
I have watched from my childhood the days when that drip waited for rain.
So what’s so special about Bharani ..?
It is a mystery that Bharani hastily prepared to start her crop in the rain or to plant a garden or to plant fertilizers.ಭರಣಿ ಬಂದ್ರೆ, ಧರಣಿ ಎಲ್ಲಾ ಬೆಳೆ
ಪೂರ್ವಜರ ಕಾಲದಿಂದಲೂ , ಅದೆಷ್ಟೇ ಪೂರ್ವ ಮುಂಗಾರು
ಅಥವಾ ಮುಂಗಾರು ಬಿದ್ದರೂ ಕೂಡ..ಅಥವಾ ಬೀಳದೇ ಇದ್ದರು..ನಿರ್ಧಿಷ್ಟವಾಗಿ ಭರಣಿ ಮಳೆಗೆ ಕಾಯುತ್ತಿದ್ದುದು ಸೋಜಿಗ.
ಆ ಒಂದು ಹನಿ ಭರಣಿ ಮಳೆಗಾಗಿ ಕಾಯುತ್ತಿದ್ದ ದಿನಗಳನ್ನು ನಾನು ನನ್ನ ಬಾಲ್ಯದಿಂದಲೂ ನೋಡಿದ್ದೇನೆ.
ಹಾಗಾದರೆ ಭರಣಿಯ ವಿಶೇಷತೆ ಏನು..?
ಭರಣಿ ಮಳೆಯಿಂದಲೇ ತಮ್ಮ ಬೆಳೆ ಶುರು ಮಾಡಬೇಕೆಂದೋ ಅಥವಾ ತೋಟವನ್ನು ಹದ ಮಾಡಲಿಕ್ಕೋ, ಗ್ೊಬ್ಬರಗಳನ್ನು ಹಾಕಲಿಕ್ಕೋ ತರಾತುರಿಯಲ್ಲಿ ತಯಾರಾಗುತ್ತಿದ್ದ ಮರ್ಮವೇನು.
ಈ ಹುಡುಕಾಟದಲ್ಲಿದ್ದಾಗ ನನಗನ್ನಿಸಿದ್ದು, ಭರಣಿ ಮಳೆಗಿಂತಲೂ ಮುಂಚೆ ಅನೇಕ ಪೂರ್ವ ಮುಂಗಾರುಗಳು ಬಂದರೂ ಕೂಡ, ಹವಾಮಾದಲ್ಲಿ ಅಷ್ಟೊಂದು ಬದಲಾವಣೆಗಳನ್ನು ನಾವು ಕಾಣುತ್ತರಲಿಲ್ಲ, ಧಗೆ, ಸುಟ್ಟು ಧಗಧಗಿಸುವ ಸೂರ್ಯ ಕಿರಣಗಳು.ಅದೇ ಭರಣಿ ಮಳೆ ನೆಲಕ್ಕೆ ಬಿದ್ದ ತಕ್ಷಣ, ಸುಡು ಬಿಸಿಲಿನ ಪ್ರಖರತೆ ತತ್ಕ್ಷಣ ಕಡಿಮೆ ಆಗ ತಕ್ಕದ್ದು,ಇದರ ಒಂದು ಸಣ್ಣ ಬದಲಾವಣೆಯಾಗಿ ನಮಗೆ ಪರಿಸರದತ್ತವಾಗಿ ಗೋಚರಿಸುವ – ಎಂದೊ ಮೊಟ್ಟೆ ಇಟ್ಟ ದುಂಬಿಗಳು, ಭರಣಿಯ ಸಿಂಚನಕ್ಕಾಗಿಯೆ ಕಾದಂತೆ ಮೊಟ್ಟೆಯಿಂದ ಭೂಮಿಯಲ್ಲಿ ಮರಿಯಾಗಿ ಒಡೆದು ಹೊರಗೆ ಬರುವ ಪ್ರಕ್ರಿಯೆ, ಇದೇ ರೀತಿ ಈ ಬೇರು ಕೊರೆಯುವಂತ -ಮುಖ್ಯವಾಗಿ ಗೂಣ್ಣೆಹುಳುಗಳು,ಬೇರುಕೊರಕು ಹುಳುಗಳು ಇವೆಲ್ಲ ಹುಳುಗಳಾಗಿ ಹೊರಬರುವಂತ್ತಾದ್ದು ಭರಣಿಯ ನಂತರವೇ..ವಿಸ್ಮಯವೆಂದರೆ ಈ ಮುಂಚಿನ ಮಳೆಗಳಲ್ಲಿ ಈ ಬಗೆಯ ಪ್ರಕ್ರಿಯಿಗಳು ಅಪರೂಪ.
ಹಾಗಾದರೆ ಭರಣಿಗೆ ಈ ಎಲ್ಲಾ ಜೀವ ಸಂಕುಲಗಳೊಂದಿಗೆ ತಾಯ್ತನದ ನಂಟಿದೆ ಎಂಬುದು ಖಚಿತವಾಯಿತು. ಹಾಗಾದರೆ, ಭೂಮಿಯ ಅಥವ ಮಣ್ಣಿನಲ್ಲಿ ಯಥ್ತೇಚ್ಛವಾಗಿರುವ ಜೀವರಾಶಿಯ(biomass) ಜೀವಾಣುಗಳಿಗೂ-ರಂಜಕ,ಪೊಟ್ಯಾಶ್ ಮತ್ತು ಇನ್ನಿತರ ಜೀವ ಪೋಷಕ, ಜೈವಿಕ ಸಮೃದ್ಧ ಜೀವರಾಶಿಗಳಿಗೂ ಕೂಡ ಈ ಮಳೆ ತಾಯಿ ಪೋಷಾಕು ವಹಿಸಿತು.
ಅದಕ್ಕಾಗಿಯೇ, ನಮ್ಮ ಪೂರ್ವಜರು ತೋಟಗಳಲ್ಲಿ ಕೊಟ್ಟಿಗೆ ಗೊಬ್ಬರ ಗುಡ್ಡೆ ಇಡುತ್ತಿದ್ದರು.ಭರಣಿ ಮಳೆಯಾದನಂತರ ಆ ಗಬ್ಬರವನ್ನು ಭೂಮಿಗೆ ಚಲ್ಲುತ್ತಿದ್ದರು. ಅವರಿಗದು ಗೊತ್ತಿರುತ್ತಿತ್ತು, ಜೀವ ಚಲನೆ ಭರಣಿಮಳೆಯ ನಂತರದಲ್ಲಾಗುವುದೆಂದು.
ಈಗ ೨೫-೩೦ ವರ್ಷಗಳಿಂದ ಮಳೆಯ ಪಂಚಾಂಗ ಬದಲಾವಣೆಯಾಗಿ,ಹವಾಮಾನ ವೈಪರಿತ್ಯಗಳ ಕಾರಣದಿಂದ ಮಳೆಯಲ್ಲಿ ಬದಲಾವಣೆಯಾಗಿದ್ದರೂ ಕೂಡ, ಈ ಗುರುತ್ವಮಾನದ ಚಲನೆ ಮಾತ್ರ ಹಾಗೆ ಉಳಿದಿದೆ. ಅದೃಷ್ಟಕ್ಕೆ ಈ ಬಾರಿ ಎಲ್ಲಾ ಕಡೆಯು ಭರಣಿ ಹದವಾಗಿ, ತುಂಬ ಚೆನ್ನಾಗಿಯೂ ಆಗಿದೆ, ಬೇಸಿಗೆಯು ತಣಿದು, ಜೀವರಾಶಿಗಳಿಗೆ ಹದವಾದ ವಾತಾವರಣ ನಿರ್ಮಿಸಿದಂತಾಗಿದೆ.
ಈಗ ನಾವು ಭೂಮಿಗೆ ಅತ್ಯಂತ ಉತ್ಕೃಷ್ಟವಾಗಿ ಜೈವಿಕ ಗೊಬ್ಬರ ಹಾಗು ಜೀವ ಪೋಷಕ Bio fertilisers ಹಾಗೂ ಬೇರುದಳನ್ನು ರಕ್ಷಣೆಮಾಡುವಂತಹ Trichoderma ಹಾಗು ಬಹು ಮುಖ್ಯವಾಗಿ, ಬೇರುಗಳನ್ನು ಕೊರೆಯುವಂತಹ,ಇದೀಗಲೇ ಚರ್ಚಿಸಿದ ಬೇರು ಕೊಳೆ ಕೀಟಗಳನ್ನು ನಾಶಮಾಡುವಂಥಹ Metarhizium,Bevaria …ಇವೆಲ್ಲವನ್ನು ಭೂಮಿಗೆ ಸೇರಿಸತಕ್ಕಂಥಹ ಪ್ರಕ್ರಿಯೆ ಪ್ರಾರಂಭವಾಗಬೇಕು….
ಈ ರೀತಿಯಾಗಿ ಭರಣಿಯನ್ನು ನಾವೆಲ್ಲರೂ ಜೀವಪರತೆಯಿಂದ ಬರಮಾಡಿಕೊಳ್ಳೋಣಾ…
ಶುಭವಾಗಲಿ.
ಡಾ. Chougandahalli Srinivas Srinivas

Comments

Leave a Reply to Isaac Herman Cancel reply

Your email address will not be published.

*